Saturday, May 12, 2007
ತೂತ್ ಕಂಡೀಶನ್ ಬಸ್!
ಬಿಸಿಲಾದರೇನು...ಮಳೆಯಾದರೇನು.. ಏನಪ್ಪಾ ಇವ್ನು ಹಾಡು ಹೇಳ್ತಾ ಇದಾನೆ ಅಂದ್ಕೊಂಡ್ರಾ. ಖಂಡಿತಾ ಇಲ್ಲ. ನಾನಿಲ್ಲಿ ಹೇಳೋಕೆ ಹೊರಟಿರುವುದು ಸಿನಿಮಾ ಹಾಡಂತೂಅಲ್ವೇ ಅಲ್ಲ. ನಾನಿಲ್ಲಿ ಹೇಳೋಕೆ ಹೊರಟಿರುವುದು ನಮ್ಮೂರ ತೂತ್ ಕಂಡೀಶನ್ ಬಸ್ಬಗ್ಗೆ!. ಹಾಗಂದ್ರೆ ಏನು ಅಂತ ಯೊಚನೆ ಮಾಡ್ತಾ ಇದೀರ. ಹೇಳ್ತೀನಿ. ಬೇಸಿಗೆಯಲ್ಲಿಬಿಸಿಲು ಮಳೆಗಾಲದಲ್ಲಿ ನೀರು ಯಾವುದೇ ಆತಂಕವಿಲ್ಲದೇ ಬಸ್ಸಿನ ಒಳಗೆ ಬರುತ್ತೆ ಅಷ್ಟೆ.ಇನ್ನು ಎಲ್ಲಿಯಾದರು ಒಂದೊಂದು ಸಲ ಎಂಜಿನ್ ಪ್ರಾಬ್ಲಂ, ಟೈಯರ್ ಪಂಕ್ಚರ್ಆಗ್ತಿರುತ್ತೆ. ಅದೆಲ್ಲಾ ಮಾಮೂಲೆ ಬಿಡಿ. ಹೇಳಿ ಕೇಳಿ ಹಳ್ಳಿ ರೋಡು. ಇರೋದ್ ಕೂಡಾಒಂದೇ ಬಸ್ಸು ಏನ್ಮಾಡಕ್ಕೆ ಆಗುತ್ತೆ ಹೇಳಿ. ಅದೇನೋ ಗಾಧೇನೇ ಇದೆಯಲ್ಲ ' ಊರಿಗೆಒಬ್ಬಳೆ ಪದ್ಮಾವತಿ' ಅಂದ ಹಾಗಿತ್ತು ನಮ್ಮ ಪರಿಸ್ಥಿತಿ.ಏನಪ್ಪಾ ಇವನು ಬರಿ ಬಸ್ಸಿನ ಬಗ್ಗೇನೇ ಕೊರೀತಾನೆ ಅಂದ್ಕೋಬೇಡಿ. ಇಲ್ಲೆ ಇರೋದುಸ್ವಾರಸ್ಯ. ನಾನು ಒಂದು ದಿನ ಹಾಗೆ ಪೇಟೆಗೆ ಅಂತ ಮನೆಯಿಂದ ಹೊರಟಿದ್ದೆ. ಹೊರಗಡೆವಿಪರೀತ ಗಾಳಿ, ಅದರ ರಭಸಕ್ಕೆ ಎಲೆಗಳು ತರಗಲೆಗಳಂತೆ ರಸ್ತೆ ತುಂಬ ಚಕ್ರದ ಹಗೆಸುತ್ತುತ್ತಾ ಕೆಂಧೂಳಿನ ಜೊತೆ ಬಾನು ಮುಟ್ಟಿತ್ತು.ನನಗೆ ಮಳೆಯ ಸ್ಪಷ್ಟ ಮುನ್ಸೂಚನೆಯ ಅರಿವಾಗಿ ನನ್ನ ಈಗಿನ ಕಾಲದ ಮೋಟು ಛತ್ರಿ ಹಿಡಿದುಹೊರಟೆ. ಆಗಿನ್ನು ಮುಂಗಾರು ಮಳೆ ಪ್ರಾರಂಭ. ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿ ಬಸ್ ಸ್ಟ್ಯಾಂಡ್. ಅಲ್ಲಿಗೆ ಬರುವಸ್ಟರಲ್ಲಿ ಬಹುತೇಕ ನನ್ನ ಮೈ ನೀರಿನಿಂದ ತೊಯ್ದಿತ್ತು.ಚಳಿ ಬೇರೆ ನಮ್ಮೂರಿನಲ್ಲಿ ಇರೋದೇ ಒಂದು ಸ್ಟಾರಿಲ್ಲದ ಹೋಟೆಲ್. ಅದರ ಹೆಸರು ಹೋಟೆಲ್ 'ಸಂಕಷ್ಠಿ'. ನಾವದನ್ನ ಪ್ರೀತಿ!ಯಿಂದ 'ಸಂಕಷ್ಠ'! ಎಂದು ಕರೆಯುತ್ತೇವೆ. ಸರಿ ಅಲ್ಲೇಹೋಗಿ ಒಂದು ಛಾ(ಟಿ) ಕುಡಿದು ಹೋಗೋಣ ಅಂತ. ಪ್ರಥಮ ಭಾರಿಗೆ ನನ್ನ ಬಲಗಾಲಿಟ್ಟು ಒಳಗೆಹೋದೆ. ಇನ್ನೇನು ನಾನಲ್ಲಿ ಕೂರ್ಬೇಕು ಅನ್ನೋವಷ್ಟರಲ್ಲಿ ಹೋಟೆಲ್ ಮಾಣಿಯ ವಿಶ್ವರೂಪದರ್ಶನವಾಯಿತು. ಅವನು ತನ್ನ ಕೈಯನ್ನು ಮನ ಬಂದಲ್ಲಿ ಹರಿ ಬಿಡುತ್ತಿದ್ದುದನ್ನು ಕಂಡುಚಳಿಯಾದರೂ ಪರ್ವಾಗಿಲ್ಲ ಅಂತ ಜಾಗ ಖಾಲಿ ಮಾಡೋವಾಗ್ಲೇ ಹೋಟೆಲ್ ಮಾಲಿಕ ಶೆಟ್ರುನನ್ನನ್ನು ನೋಡಿ ಏನು ಹೆಗ್ಡೇರೇ...ಹಾಗೆ ಹೊರಟು ಬಿಟ್ರಿ. ಟೀ, ಕಾಫಿ ಕುಡೀಬೋದಲ್ಲಅಂದ. ನಾನೇಕೆ ಮತ್ತೆ ಮಾಣಿ ಪುರಾಣ ಹೇಳಬೇಕು ಅಂತ. ಇಲ್ಲ ಶೆಟ್ರೆ ನನಗೆ ಬಸ್ಸಿಗೆ ಸಮಯಆಯ್ತು ಅಂತ ಬಂದೇ ಬಿಟ್ಟೆ. ಅವನಿಗೆ ಹೇಳಿದ್ರೂ ಅಷ್ಟೆ. ಆಚೆ ಹೋಗಿ ಅವನ್ನೆಲ್ಲಾಮಾಡಬಾರದಿತ್ತಾ ಅಂತಾನೆ.ನನಗಂತೂ ಇನ್ನು ಜೇವಮಾನದಲ್ಲಿ ಯಾವ ಹೋಟ್ಲಿಗೂ ಹೋಗಬಾರದು ಅಂತ ಅನ್ನಿಸಿಬಿಡ್ತು. ನಾನುಟೈಂ ನೋಡ್ತೀನಿ ಇನ್ನೂ ಗಂಟೆ ಹನ್ನೊಂದಾಗಿತ್ತು. ಬಸ್ ಬರೋಕೆ ಇನ್ನೂ ಇಪ್ಪತ್ತು ನಿಮಿಷ ಇತ್ತು. ಅಷ್ಟು ಹೊತ್ತು ಏನಪ್ಪಾ ಮಾಡೋದು ಅಂತಾ ಯೋಚನೆ ಮಾಡ್ತಾ ಇರ್ಬೇಕಾದ್ರೆಬಂದ್ಲಪ್ಪಾ.... ಅದು ಎಲ್ಲಿಂದಾ ಬಂದ್ಲೋ ಗೊತ್ತಿಲ್ಲ. ಆದರೆ ಅಪ್ಸರೆಯಂತಾ ಹುಡುಗಿ ಬಂದ್ಲು. ಕಣ್ಣಾರೆ ಅಪ್ಸರೆಯನ್ನಂತೂ ನೋಡಿನ್ನವಾದ್ದರಿಂದ ಇವಳೆ ದೇವಲೋಕದ ಅಪ್ಸರೆ ಅಂತ್ ಅನ್ನಿಸಿಬಿಡ್ತು. ಅಬ್ಬಾ!!! ಅದೇನು ಚಂದಾ ಅಂತೀರಿ. ನೋಡೋಕೆ ಎರಡು ಕಣ್ಣುಸಾಲದು. ಅವಳ ಹೈಟು, ವೈಟು, ಸ್ತ್ರಕ್ಚರ್ ಎಲ್ಲಾನು ಸೂಪರ್. ಆಕೆಯ ಕಣ್ಣಿನ ಹುಬ್ಬು ತೆಳ್ಳಗೆ ನೀಳವಾಗಿ ಹರಡಿತ್ತು, ಕಣ್ಣಿನಲ್ಲಿ ಏನೋ ಸೆಳೆತ, ಗುಳಿ ಬಿದ್ದ ಕೆನ್ನೆ, ರಕ್ತವೇ ಜಿನುಗುತ್ತಿದಯೇನೋ ಅನ್ನುವಂತಹ ತುಟಿ, ಅಪ್ಸರೆಗೆ ಇರಬೇಕಾದ ಎಲ್ಲಾ ಸೌಂದರ್ಯಾನು ಇವಳಲಲ್ಲೇ ಇದೆ.ಅರೆ ಏನು ಇವನು ಬರಿ ಹುಡುಗಿ ಬಗ್ಗೇನೇ ಕೊರಿತಾ ಇದಾನೆ ಅಂದ್ಕೋಬೇಡಿ. ಅವಳು ಅಷ್ಟು ಚನ್ನಾಗಿರೋದಿಕ್ಕೆ ನಾನು ಹೊಗಳಿದ್ದು. ಅಷ್ಟೊತ್ತಿಗೆ ಗಂಟೆ ಹನ್ನೆರಡಾಗಿತ್ತು. ಇನ್ನೂ ಬಸ್ ಬಂದಿರಲಿಲ್ಲ. ಅವಳು ನಡೆದು ನನ್ನ ಹತ್ತಿರ ಬರತೊಡಗಿದಳು. ಆ ಮಳೆಯಲ್ಲೂ ನನ್ನಲ್ಲಿಒಂಥರಾ ರೋಮಾಂಚನ. ನನ್ನನ್ನೇನಾದ್ರೂ ಮಾತನಾಡಿಸಿದ್ರೆ ಅಂತ ಅಂದುಕೊಳ್ಳುತ್ತಿರುವಾಗಲೇ ಮಾತಾಡಿಸಿ ಬಿಡ್ಬೇಕೆ.?ಏಕೆಂದರೆ ಬಸ್ಸಿಗಾಗಿ ಕಾಯ್ತಾ ಇರೋದೆ ನಾವಿಬ್ರು. ಬಸ್ ಎಷ್ಟೊತ್ತಿಗೆ ಬರೋತ್ತೆ ಅಂದ್ಲು. ಇಷ್ಟೊತ್ತಿಗಾಗಲೇ ಬರಬೇಕಿತ್ತು, ಯಾಕೆ ಬಂದಿಲ್ವೋ ಗೊತ್ತಿಲ್ಲ ಅಂದೆ. ಸರಿ ಮುಂದಿನ ಬಸ್ಸು ಯಾವಾಗ ಅಂದ್ಲು, ನಮ್ಮೂರಿಗೆ ಇರೋದೆ ಇದೊಂದು ಬಸ್ಸು. ಅದು ಯಾವಾಗ,ಎಷ್ಟು ಹೊತ್ತಿಗೆ ಬರುತ್ತೆ ಅಂತ ಹೇಳೋಕಾಗಲ್ಲ ಅಂತಿರಬೇಕಾದ್ರೆ ಬಸ್ ಬಂದ್ ಬಿಡ್ತು. ಆದರೆ ಮಳೆ ಮಾತ್ರ ನಿಂತಿರಲಿಲ್ಲ. ಏಕಪ್ಪಾ ಲೇಟು ಅಂತ ಕಂಡಾಕ್ಟರ್ ನ ಕೇಳಿದರೆ ದಾರೀಲಿ ಬಸ್ ಕೈ ಕೊಡ್ತು ಅಂದ. ನಾನು ತೀರಾ ವಿಚಾರಿಸಿಕೊಳ್ಳೋಕೆ ಹೋಗಿಲ್ಲ. ಏಕೆಂದರೆ ಪಕ್ಕದಲ್ಲಿ ಮೇನಕೆ ಇದ್ಲಲ್ಲ!.ಸರಿ ಇಬ್ರೂ ಒಂದೇ ಸೀಟಲ್ಲಿ ಕುಳಿತುಕೊಂಡೆವು. ಆಗ ಮಳೆ ಬೇರೆ ಜೋರಾಯ್ತು. ನಾವು ಕೂತ ಜಾಗದಲ್ಲೂ ನೀರು ಸುರಿಯಲು ಶುರುವಾಯಿತು. ಅದಕ್ಕೆ ಅವಳು ಬೇರೆ ಸೀಟಿನಲ್ಲಿ ಕೂರೋಣಎಂದಿದ್ದಕ್ಕೆ ನಾನು ಮುಗುಳ್ನಗೆಯಿಂದಲೇ ಆಗಲಿ ಎಂದೆ. ಯಾಕೆ ಅಂದ್ರೆ ನಮ್ಮೂರ ಬಸ್ಸಿನ ಹಣೆಬರಹ ಇಷ್ಟೇ ಅಂತ ಗೊತ್ತಿತ್ತು. ಅಲ್ಲೂ ಸಹ ನೀರು ಸೋರ್ತಿತ್ತು. ಅವಳ ಮುಖ ಕೂಡಾ ಪೆಚ್ಚಾಗಿದ್ದನ್ನು ನೋಡಿದ ನಾನು ಬಸ್ಸಿನಲ್ಲಿ ನನ್ನ ಛತ್ರಿಯನ್ನು ಬಿಚ್ಚಿ ಕುಳಿತೆ. ಹಾಗೆ ಅವಳ ಕುಲ ಗೋತ್ರ ಎಲ್ಲ ತಿಳಿದೆ ಬಿಡಿ, ಆ ಪ್ರಶ್ನೆ ಬೇರೆ."ಒಂದಲ್ಲಾ ಮಗಳಿಗೆ ಸೊಂದಲ್ಲಾ ಬ್ಯಾನೆ" (ಯಾವಾಗಲೂ ಒಂದಲ್ಲ ಒಂದು ರೋಗ ಇದ್ದೇಇರುತ್ತೆ) ಅಂದಹಾಗಾಯ್ತು ನಮ್ಮೂರ ಈ ತೂತ್ ಕಂಡೀಶನ್ ಬಸ್ಸಿನ ಪರಿಸ್ಥಿತಿ. ಅದೇನೇಆದ್ರು ಸಹ ಈ ತೂತ್ ಕಂಡೀಶನ್ ಬಸ್ಸು ನನಗೊಂತರ ಮಜನೆ ಕೊಡ್ತು. ಏನಂತಿರಿ....
Subscribe to:
Posts (Atom)